" ಕಣ್ನಂಚಲೇ ಹೆದರುತ ನಿನ್ನನು ನೋಡಿದೆ
ಕ್ಷಣದಲೇ ಜಾರುತ ನಸು ನಗೆಯ ಬೀರಿದೆ
ತಿಳಿಯದಲೇ ನಾಚುತ ತಳವಳಿಸ ತೊಡಗಿದೆ
ಏನೆಂದು ಹೇಳಲಿ ನಾ ತಿಳಿಯದಾದೆ
ಯಾವುದೋ ಜನುಮದ ನೆನಪೊಂದು ಕರೆದಿದೆ
ಮುಚ್ಚಿದ್ದ ಕದವು ತಾನಾಗೆ ತೆಗೆದಿದೆ
ಹೊಸ ಹುರುಪು ಮೂಡಿ ಜಲರಾಶಿ ಹರಿದಿದೆ
ಕನಸಲೂ ಮನಸಲೂ ನೀನೆ ತುಂಬಿ ಹೋದೆ
ನನ್ನ ಮನಸಿನ ಕಥೆಯ ಹಾಡಬೇಕೆನಿಸಿದೆ
ಮದುರ ಕಂಠದ ಶಬ್ದ ಹರಡಬೇಕೆನಿಸಿದೆ
ಪ್ರೀತಿ ಎಂದರೆ ಇದೆಯೇ ಕೇಳಬೇಕೆನಿಸಿದೆ
ಮೊದಲ ಪ್ರೀತಿಯ ಸವಿಯ ಸವಿಯಬೇಕೆನಿಸಿದೆ "
3 comments:
its very nice
again i started reading these lines which are so meaningful and near to my soul.....these are true words from a true heart
Nobody can define the true heart lol.But thanks for these comments.
Post a Comment