Wednesday, 24 August 2011

Silence ..

How fragile the heart is.. I am so amazed how the heart works. Its different and something beyond the explanation. We call it in Kannada -'Manasu'.
When it fears it does not know what to do except beating it fast; when it thrills it does not know what to do either except thrilling the whole body. I will try not to give lecture but try to spill few words which would describe the silent heart. Its dead silent and needs a trigger. It needs the love and peace which it dearths;

ಏಕಿದು ಮನಸು , ಸುಮ್ಮನೆ ಮುನಿಸು
ಮಾತಿನ ಜೊಲ್ಲೆಯ ಹೊರೆಯನು ಇಳಿಸು
ಮೌನವ ಮುರಿದು ಬೆಳಕನು ತರಿಸು
ನಿಲ್ಲದ ಹಾಗೆ ಡಮರನು ಬಾರಿಸು ..

ದೈರ್ಯದ ಬಿಲ್ಲನು ಹೆಗಲಿಗೆ ಏರಿಸು
ಕಣ್ಣಿನ ಬಿಂಬದಿ ಬೆಂಕಿಯ ಹಾರಿಸು
ಅಂಜಿದ ಮನಸನು ಛೇಡಿಸಿ ನಗಿಸು
ಮನಸಿನ ಒಡವೆಯ ಸಾರಿಸಿ ಒರೆಸು ...

ಶ್ರುತಿಯನು ಬಿಡದೆ ರಾಗವ ಹರಿಸು
ಬೈರವ ರಾಗದಿ ಜಪವನು ತಪಿಸು
ಹೇಳದ ಹಾಗೆ ನೋವನು ಸಹಿಸು
ಅಂಜದೆ ಅಳುಕದೆ ಪ್ರೀತಿಯ ಬಯಸು ..