Sunday, 4 April 2010

Manasu

ದೂರ ದೂರ ತೇಲುತಿದೆ ಮನಸು, ತಿರುವು ತಿರುವು ತಿರುಗುತಿದೆ ಮನಸು,
ಉಕ್ಕಿ ಉಕ್ಕಿ ಹರಿಯತಿದೆ ಮನಸು, ಹಳ್ಳ ಹಳ್ಳ ದಾಟುತಿದೆ ಮನಸು ,

ಎಲ್ಲಿ ಹುಟ್ಟಿ ಎಲ್ಲೋ ಹರಿದು ನದಿಯ ಕಡೆಗೆ ದುಮುಕುತಿದೆ ಮನಸು ,
ತಡೆಯ ಹೋದ ಬಂಡೆಗಳನು ಸೀಳಿ ಸೀಳಿ ಕೊರೆಯುತಿದೆ ಮನಸು,

ಯಾರು ತಡೆಯಲಾಗಲಿಲ್ಲ,
ಕಣ್ಣು ಮುಚ್ಹಲಾಗಲಿಲ್ಲ,
ವೇಗ ಕಡಿಮೆಯಾಗಲಿಲ್ಲ ,
ಕೀರ್ತಿ ಕಡಿಮೆಯಾಗಲಿಲ್ಲ,

ಎಲ್ಲವನ್ನು ತೊರೆದು ಜನಿಸಿ ಹುಟ್ಟುತಿದೆ ಮನಸು