Ibbani
ಮೇಘದ ನಾದಕೆ ಶ್ರುತಿಯನು ಮೀಟಿ ,
ಹಾಡಿದೆ ಕೋಗಿಲೆ ಬೆಟ್ಟವ ದಾಟಿ ,
ಮಂಜಿನ ಹನಿಗಳು ಮಿನುಗಿದೆ ಕೋಟಿ ,
ಅರಳಿತು ತಾವರೆ ನೋಡುತ ಜ್ಯೋತಿ !!
EE Nadu
ಬರೆಯ ಕುಳಿತಿಹ ಕವಿಗೆ ಸಾಲುಗಳು ಬಾರದು,
ಕರುನಾಡ ಬಾಷೆಯನೆಷ್ಟು ಹೊಗಳಿದರು ಸಾಲದು.
ಸುಂದರ ಅತಿ ಮಧುರ ಕನ್ನಡ ನಾಡು ,
ಶಿಲೆಗಳ ಬಣ್ಣಿಸೊ ಕಲೆಗಳ ಬೀಡು !!
ಕೋಟಿ ಶಕ್ತಿಯು ಕೂಡಿ ಕರಗಿಸಲಾರದು ,
ಕಪ್ಪು ಮಸಿಯಲಿ ತೀಡಿ ಅಳಿಸಲುಬಾರದು.
ಸುಮಧುರ ಸಂಗಮ ಕನ್ನಡ ನಾಡು,
ನವರಸ ಹೊಗಳುವ ಕವಿಗಳ ಬೀಡು !!
ವಯಸಿನಲಿ ನೋಡಿದರೆ ನೂರು ಶತಕಕೂ ಹಿರಿದು,
ಮನಸಿನಲಿ ಇಣುಕಿದರೆ ಹಸಿಗೂಸಿಗೂ ಕಿರಿದು.
ರಮಿಸುವ ವೈಭವ ಕನ್ನಡ ನಾಡು ,
ಚತುರರು ಜೀವಿಸೊ ನೆಲೆಗಳ ಬೀಡು !!