Sunday, 15 September 2013

Jogi

ಸಾವಿರ ಕನಸುಳ್ಳ ಜೋಳಿಗೆಯ ಜೋಗಿ 
ಎಳೆಯುಳ್ಳ  ಸೀರಿಯಲಿ ಮುಕುಟವ ಮಾಡಿ 
ಕಲೆಯೆಂಬ ಪದಗಳನು ನಾಲಿಗೆಯಲಿ ಹಾಡಿ 
ಬೇಡಿಹನು  ಮನೆ ಮುಂದೆ ಶಿರ ಬಾಗಿ ಕೂಗಿ 

ಮನೆ ಮುಂದು , ಮನ ಹಿಂದು , ಸಾಹಸದ ಕಡಲು 
ಮರೆತಿರುವೆ ಸವಿಬೆಲ್ಲ ಕಾಹಿಲೆಯ ಮಡಿಲು 
ಸುಖವೆಂಬ ಬೀಜವನು ಅರಸುತಿಹ ಬೆರಳು 
ನಗುತಿಹುದು ಜಗವೆಲ್ಲ ಮುಸುಕೆಳೆದು ಒಡಲು 

ಜೋಗಿಯ ಮಾತನ್ನು ಕೇಳು ನೀ ಮಗನೆ 
ನಿನಗೊಂದು ಒಡವೆಯನು ನೀಡುವನು ಸಹನೆ 
ಸಾವಿರ ವರುಷದಲಿ ಮರೆಯದಿರು ಕರುಣೆ 
ಕಲ್ಪನೆಯು ಹೋಗುವುದು ಬೀಸುವುದು ಮಹಿಮೆ 

Monday, 15 April 2013

Parichaya


ತಾರೆಯ ಲೋಕದ ಹೊಳೆಯುವ ಚೆಲುವೆ 
ಹಚ್ಚು ಬಾ ನನ್ನಯ ಲೋಕಕೆ ಬಣ್ಣವ 
ತೋರುಬಾ ಗೆಳೆತನದ ಅನುಭವ 
ಮಾಡು ಬಾ ಮನಸನ್ನು ತನ್ಮಯ!!

ನಗುತಲೆ ನಾಚುತ  ಸೆಳೆಯುವ ಚೆಲುವೆ 
ಬಿಡದಿರು ನನ್ನಯ ಈ ಲೋಕವ 
ಹರಿಸು ನೀ ಸುಖದ ಚಿಲುಮೆಯ 
ಮಾಡಿಸು ಪ್ರೀತಿಯ  ಪರಿಚಯ  !! 

Sunday, 31 March 2013

Shreemati

ಸಿರಿ ಗೌರಿ ಶ್ರೀಮತಿಯು ಈ ನನ್ನ ಹುಡುಗಿ, 
ಅಳುತಾಳೆ ಖುಷಿಯಲ್ಲಿ ಮನ ತುಂಬಾ ಕರಗಿ ,
ಸವಿಯಾದ ಗಂಧದಲಿ ಮಾಡಿಹಳು ಬೆಡಗಿ,
ಕೇಳಿಹಳು ತವರಿನ ಮನೆಯಲ್ಲಿ ಮಲಗಿ  .. 

ಜೀವನದ ದಾರಿಯಲಿ ಮಗುವಂತೆ ನಗಿಸು,
ಮನಸಿನ ಕೋಣೆಯಲಿ ಬೆಳಕನ್ನು ಹರಿಸು,
ಚೆಲುವಾಗಿ ನನ್ನನ್ನು  ಮನಸಲ್ಲಿ ಜಪಿಸು,
ಸಾವಿರ ಜನುಮದಲು ನನ್ನನ್ನೇ ವರಿಸು ..

ಸೊಗಸಾದ ಕನಸಲ್ಲಿ ಮನೆಯೊಂದು ಮಾಡಿಸು,
ಬರೆದೊಂದು ಕವಿತೆಯನು ಹಾಡನ್ನು ಹಾಡಿಸು , 
ಸುಖವೆಂಬ ತೇರನ್ನು ನನ್ನಲ್ಲಿ ಎಳೆಸು , 
ನಗುತಿಹ ಕಣ್ಣಲ್ಲಿ ಕಣ್ಣಿರ ಬರಿಸು .. 

ಮಲೆನಾಡ ಬಯಲಲ್ಲಿ ಸೇತುಮೆಯ ಮನೆಗೆ, 
ತಂದಿಹಳು ನವಿಲಾಗಿ ಸುಂದರದ ಮಳಿಗೆ,
ಪ್ರೀತಿಯ ನೀರನ್ನು ಹರಡಿಹಳು ನದಿಗೆ ,
ಸುಖವೆಂಬ ಗಿಡವನ್ನು ಬಿತ್ತಿಹಳು ದಡಕೆ  .. 

Thursday, 17 January 2013

Today's Kids

Get me the wand; 
I want to spell the magic,speak the gothic but do the logic. 
I think I am the godsend; but never call me ascetic because I am little alcoholic. 
Keeping the cool is in my vocation,
leaving the fight is not in my equation.. ..