I could not appreciate the painter in any other way. Big thank you for inspiring me to write few lines.. I was going through few paintings painted by unknown painter who drawn village women in the richest manner. So thanks to those village women as well..
ನಸು ನಾಚಿ ಕುಳಿತಿರುವ ರೂಪಸಿಯು ಯಾರು?
ಸಾಗರದ ತೀರದಲಿ ಮೆದುವಾದ ಮರಳಿನಲಿ
ತಲೆ ಬಾಗಿ ನಡೆದಿರುವ ಕಣ್ಮಣಿಯು ಯಾರು?
ಓಲೆ ಮೇಲೆ ನೀರಿಟ್ಟು ಮೈತುಂಬ ಮಡಿಯುಟ್ಟು
ಮಣೆ ಮೇಲೆ ಜಪಿಸಿರುವ ಬಿಗುಮಾನಿ ಯಾರು?
ಕಾಲಮೇಲೆ ಕಾಲಿಟ್ಟು ಹುಡಿ ಎಲೆಯ ಬಾಯ್ಲಿಟ್ಟು
ರಸವನ್ನು ಹಗಿದಿರುವ ಅಭಿಮಾನಿ ಯಾರು?