Friday, 16 March 2012

Hongansu

ಕಂಡೆ ನಿನ್ನ ಪ್ರತಿಬಿಂಬ ನಾ ನನ್ನ ಕನಸಿನಲಿ,
ನಗುವ ಚೆಲ್ಲುತ ನಿಂದೆ ನೀ ನನ್ನ ಮನಸಿನಲಿ!!
ಸಣ್ಣದೊಂದು ಬಯಕೆ ಮೂಡಿದೆ ಈ ನನ್ನ ಹೃದಯದಲಿ,
ಕತ್ತಲೆಯ ಚಂದಿರನು ಮೂಡಿದನು ಹಗಲಿನಲಿ!!

ಮುಚ್ಚಿಡಲು ಯತ್ನಿಸಿದೆ ನಾ ನನ್ನ ಇಚ್ಚೆಯನು,
ಕಲ್ಲೆದೆಯ ಹೃದಯದಲಿ ಬಿತ್ತಿರಲು ಮೊಳಕೆಯನು!!
ತಲೆದೂಗಿದೆ ಮನಸೆಲ್ಲ ಉಲ್ಲಾಸದ ಅಲೆಯೆದ್ದು,
ಬದಲಾಗಿದೆ ಬಯಲೆಲ್ಲ ಮುಂಗಾರಿನ ಮಳೆ ಊಯ್ದು!!

ಮೋಡ ಕವಿದ ಮನಕೆ ಇದು ಕನಸೆಂದು ತಿಳಿಯದು,
ಕುರುಡಾದ ಕಂಗಳಿಗೆ ಸತ್ಯವು ಸುಳ್ಳೆಂದು ಅರಿಯದು!!
ಬೆಳಕು ಕೆಡಿಸಿತು ಕನಸು, ಮುನಿದು ಮರುಗಿತು ಮನಸು,
ಸೊಗಸಾದ ಬುತ್ತಿಯಲಿ ಇದು ಒಂದು ಹೊಂಗನಸು!!