Friday, 2 January 2009

ಮಾಯಾಲೋಕ

" ರಾತ್ರಿಯಲೊಂದು ಬಿಂಬವ ಮಾಡಿ ನೋಡಿದ ಅರಮನೆ ಎಲ್ಲುಂಟು
ಕಹಳೆಯ ಸದ್ದು ಕೇಳದೆ ಇರಲು ಮಾಡಿದ ಕವಚವು ಎಲ್ಲುಂಟು
ಪಕ್ಕದಿ ಮನಗಿದ ಮಡದಿಯ ಮನಸನು ಅರಿಯುವ ಸೂತ್ರವು ಎಲ್ಲುಂಟು
ಚೆಂದದಿ ನಗುವ ಹುಣ್ಣಿಮೆ ಬೆಳಕಿನ ಅಂದವ ಮಿರಿಸುವರ್ಯಾರುಂಟು?


ಒಂದೆಡೆ ಕತ್ತಲು ಒಂದೆಡೆ ಬೆಳಕು ಮಾಡಿದ ಒಡೆಯನು ಎಲ್ಲುಂಟು
ಸುಂದರ ಹುಡುಗಿಯ ಬಣ್ಣವ ಕೆಡಿಸಿ ಕೆಂದುಟಿ ನೀಡಿದವನ್ಯಾರುಂಟು
ಮೂಡಿಸಿ ಸೂರ್ಯನ ಚಂದ್ರನ ಕರಗಿಸಿ ಆಟವ ನೆಡೆಸಿದವನ್ಯಾರುಂಟು
ಹೂವ್ಗಳ ತೂಗಿಸಿ ಜೇನನು ಮೂಡಿಸಿ ಬಣ್ಣವ ಬಳಿದವನ್ಯಾರುಂಟು? "

1 comment:

Unknown said...

Oye Pretty good yar.. Not knowing you have such a good talent in you.