Monday, 5 July 2021

ಕನಸಿನ ಕರೋನ

ಏಕೋ ಏನೋ ಮನಸು ಸರಿಯಿಲ್ಲ, ಏನೋ ಒಂದು ಪೇಚಾಟ , ಏನೋ ಒಂದು ಒಳ ಮನಸಿನ ಕಿರುಚಾಟ. ಯಾಕೆ? ಎಲ್ಲೇ ನೋಡಿದರು ಸಾವಿನ ಆಕ್ರೋಶ , ನೋವಿನ ಸಂಕಷ್ಟ . ಸಂಕಟ ಮನೆಮಾಡಿ ಯಮನೇ ನಾಚುವಂತೆ ಮಾಡಿದ ಕರೋನ. ಈ ಗೊಂದಲದ ಚರ್ಚೆಯಿಂದ ಹೊರಗೆ ಬರುವ ಪ್ರಯತ್ನ ಮಾಡುವನಿದ್ದೆ ಅದೇ ವೇಳೆಗೆ ನನ್ನ ಸ್ನೇಹಿತನಿಂದ ಕರೆಯೊಂದು ಬಂತು. ಲೊಕ್ಡೌನ್ ಹಿಂದೆಲ್ಲ ಮೊಬೈಲ್ ಕರೆಗಳನ್ನು ಇಗ್ನೋರ್ ಮಾಡಿರುತ್ತಿದ್ದ ನನಗೆ ಇತ್ತೀಚಿನ ದಿನಗಳಲ್ಲಿ ಯಾವುದೇ ಕಾಲ್ ಬಂದರು ಒಂದೆರಡು ಮಾತಾಡಲು ಅನ್ನಿಸುತ್ತದೆ . ಏನೋ, ಎರಡು ಮಾತಾಡಿದರೆ ಸ್ವಲ್ಪ ಸಂತೋಷ ಮತ್ತೆ ಮನಸ್ಸಿಗೆ ಅಯ್ ಅನಿಸುತ್ತದೆ.

ಕಾಲ್ ರಿಸೀವ್ ಮಾಡಿ ಹಲೋ ಅಂದೇ.. ನಮ್ಮ ಆನಂದ ' ಹೇ ವಿನಯ್ , ಫೇಸ್ಬುಕ್ ಲೈವ್ ಮಾಡ್ತಾ ಇದ್ದೀನಿ ನೋಡೋ ', ಅಂದ. ನಾನು "ಅಯ್ಯೋ ಕರ್ಮಾ" ಎಂದು ಫೇಸ್ಬುಕ್ ಲಾಗಿನ್ ಆದೆ. ಆನಂದ ಲೈವ್ ಹಾಗಿದ್ದ. ಕಾಮೆಂಟ್ಸ್ ನೋಡಿದರೆ ಅದೇ 'ಊಟ ಅಯಿತ , ಕಾಫಿ ಅಯಿತ' ಮೆಸೇಜ್ ಗಳು ತುಂಬಿದ್ದವು. ಲಾಗ್ಔಟ್ ಮಾಡಿ ಹೊರಬಂದೆ,.. ಆಗಲೇ ಹನ್ನೊಂದಾಗಿತ್ತು. ಅಲ್ಲೇ ಇದ್ದ ಹಾಸಿಗೆ ಮೇಲೆ ತಲೆಯೂರಿದೆ.

ರಾತ್ರಿ ಒಂದು ಹೊತ್ತಲ್ಲೇ ಯಾಕೋ ಎಚ್ಚರ ವಾಯಿತು. ಎದ್ದು ಕುಳಿತೆ. ನೋಡಿದರೆ ಮೈಯಲ್ಲ ಒದ್ದೆ , ತಲೆ ಯಾರೋ ಒಡೆಯುವ ರೀತಿ ಭಾಸವಾಯಿತು. ಅಲ್ಲೇ ಇದ್ದ ಸ್ವಲ್ಪ ನೀರು ಕುಡಿದು , ಬೀರುವಿನ ಒಳಗೆ ಮಾತ್ರೆ ಹುಡುಕಲು ಕಾಲ್ ಮೇಲೆ ನಿಂತೇ. ಕಾಲು ಭಾರವಾದ ಭಾಸವಾಯಿತು. ಕಂಟ್ರೋಲ್ ಇಲ್ಲದಂತಾಗಿ ಅಲ್ಲೇ ಕುಸಿದು ಕುಳಿತೆ.. ಅರೆ , ಇದೇನು ಸಂಜೆ ತಾನೇ ಚೆನ್ನಾಗಿದ್ದನಲ್ಲ ಅಂತ ಮತ್ತೆ ಮಂಚ ತುದಿ ಇಡಿದು ಬೀರುವಿನ ಚಿಲಕ ಇಡಿದು ಕಾಲ್ ಮೇಲೆ ನಿಂತು ಕೊಂಡೆ.. ಬೀರುವಿನ ಒಳಗೆ ಪ್ಯಾರಸಿಟಮಾಲ್ ಇದ್ದವು.. ಒಂದೆರಡು ಮಾತ್ರೆಯನ್ನು ಬಾಯೊಳಗೆ ಹಾಕಿ ನೀರು ಕುಡಿದು ಹಾಗೆ ಮಂಚದ ಮೇಲೆ ಕುಳಿತು, ಯಾಕೆ ಹೀಗಾಯ್ತು. ನಾನು ಎಲ್ಲೆಯೂ ಹೋಗಿಲ್ಲ.. ಲೊಕ್ಡೌನ್ ಆದ ದಿನದಿಂದ ಎಲ್ಲೂ ಹೊರಗಡೆ ಹೋಗೆ ಇಲ್ಲ... ಮತ್ತೆ ಏನು ವಿಷಯ ಇದು..

ಅಷ್ಟು ಯೋಚನೆ ಮಾಡುವ ಒಳಗೆ ನನ್ನ ಕಣ್ಣು ಭಾರವಾಗಿ ಮತ್ತೆ ಹಾಸಿಗೆ ಮೇಲೆ ಮಲಗಿದೆ.. ಮನೆಯಲ್ಲಿ ಯಾರು ಇಲ್ಲ ಅಂತ ತಿಳಿದ ಅಂತರಾತ್ಮಕ್ಕೆ ಸ್ವಲ್ಪ ಡವ ಡವ ಅನ್ನುವ ಸೌಂಡ್ ಕೇಳಿತ್ತು. ಹಾಗೆಯೆ ಮನಗಿ ನಿದ್ದೆ ಮಾಡಿದೆ.

ಮತ್ತೆ ಎಚ್ಚರವಾಗಿ ಗೋಡೆಯ ಮೇಲಿನ ಗಡಿಯಾರ ನೋಡಿದೆ.. ಗಂಟೆ ಎಂಟು ಆಗಿತ್ತು. ತಲೆ ಇನ್ನು ನೋವು ಇತ್ತು.. ಸ್ವಲ್ಪ ಜ್ವರವು ಬಂದಿತ್ತು. ಮೊದಲು ಪೇರೆಂಟ್ಸ್ ಗೆ ಕಾಲ್ ಮಾಡಿ ತಿಳಿಸುವ ಎಂದು ಮೊಬೈಲ್ ಹುಡುಕಾಡಿದೆ,. ಮೊಬೈಲ್ ಬ್ಯಾಟರಿ ಇಲ್ಲದೆ ಸ್ವಿಚ್ ಆಫ್ ಆಗಿತ್ತು. ತುತ್ ಎಂದು ನಾಲಗೆ ಕಚ್ಚಿ ಮೊಬೈಲ್ ಚಾರ್ಜ್ ಮಾಡಲು ಹಾಕಿದೆ. ಸ್ವಲ್ಪ ಏನಾದ್ರು ತಿನ್ನುವ ಎಂದು ಕಿಚನ್ ಗೆ ಬಂದೆ.. ರಾತ್ರಿ ಮಾಡಿದ ರೊಟ್ಟಿ ಮತ್ತೆ ಪಲ್ಯ ಇನ್ನು ಇತ್ತು. ಅದನ್ನೇ ಸ್ವಲ್ಪ ಬಿಸಿ ಮಾಡಿ ತಿಂದು ಪೇರೆಂಟ್ಸ್ ಗೆ ಕಾಲ್ ಮಾಡಿದೆ. 'ನಂಗೆ ಸ್ವಲ್ಪ ಜ್ವರ ಬಂದಿದೆ' ಅಮ್ಮ ಅಂದೇ . ಅವರು 'ಅಯ್ಯೋ , ಎಲ್ಲಿಗೆ ಹೋಗಿದ್ದೆ ' ಎಂದು ಕೂಗಾಡಿದರು. ಸರಿಯಾಗಿ ಬೈಯ್ ಸಿಕೊಂಡು ಕಾಲ್ ಕಟ್ ಮಾಡಿದೆ. ಇವಾಗ ಲೊಕ್ಡೌನ್ ನೀವು ಯಾರು ಇಲ್ಲಿಗೆ ಬರೋಕೆ ಹೋಗ್ಬೇಡಿ ಅಂತ ಹೇಳಿ ಕಾಲ್ ಇಟ್ಟಿದ್ದೆ. ಏನ್ ಮಾಡೋದು , ಜ್ವರ ಗಂಟಲು ಕೆರೆತ ಎಲ್ಲ ಕೋವಿಡ್ ಸಿಂಪಿಟೋಮ್ಸ್ ಇದೆ. ಸ್ವಲ್ಪ ಕಾರ ತಿಂದು ನೋಡಿದೆ.. ಕಾರಾನು ಗೊತ್ತಾಗ್ತಾ ಇಲ್ಲ. ಅಯ್ಯೋ ಇದೇನು ಕರ್ಮಾ ಅಂತ ಮನ್ಸಲ್ಲೇ ನನ್ನನ್ನೇ ಬೈಕೊಂಡು ಮುಖ ತೊಳೆದು ರೆಡಿ ಆಗಿ ಹೇಗಾದ್ರು ಹಾಗ್ಲಿ . ಹಾಸ್ಪಿಟಲ್ ಹೋಗಿ ಬರೋಣ ಅಂತ ಹೋದೆ. ಆಸ್ಪತ್ರೆ ರೀಚ್ ಹಾಗೋ ಮುಂಚೆನೇ ಆಸ್ಪತ್ರೆ ಇಲ್ಲಿಯೇ ಇದೆ ಅಂತ ಜನ ಜಾತ್ರೆ ತರ ತುಂಬಿದ್ದು ನೋಡಿ ಸ್ವಲ್ಪ ಹೆದರಿಕೆ ಆಯಿತು.. ಆದ್ರೆ ಹಾಗೆ ಹೋಗಿ ಟೋಕನ್ ತಕೊಂಡು ಕ್ಯೂ ನಲ್ಲಿ ಕುಳಿತೆ. ಅವ್ರಿಇವ್ರನ್ನ ನೋಡೋದ್ರಲ್ಲಿ ನನ್ನ ಹೆಸರು ಬಂತು. ಡಾಕ್ಟರ್ ಹತ್ರ ಹೋಗಿ ಎಲ್ಲ ಹೇಳಿದೆ. ಅವ್ರು, ಒಂದು ಕೋರೋನ ಟೆಸ್ಟ್ ಮಾಡ್ಸಪ್ಪ ಅಂತ ಹೇಳಿ ಅಲ್ಲಿವರೆಗೆ ಈ ಮಾತ್ರೆ ತಗೋ ಅಂತ ಬರೆದು ಕೊಟ್ರು,

ಅಲ್ಲಿಂದ ಕೋರೋನ ಟೆಸ್ಟ್ ಸೆಂಟರ್ ಗೆ ಬಂದು ಟೋಕನ್ ತಗೊಂಡು ಕುಳಿತೆ. ಈ ಸಾರಿ ಅವ್ರಿವ್ರುನ್ನ ನೋಡಿದ್ರುನ್ನು ಏನು ಟೈಮ್ ಹೋಗ್ಲಿಲ್ಲ. ನಾನು ೫೦ ಜನ ಹಿಂದೆ ಇದ್ದೆ. ನಿಲ್ಲೋಕೆ ಹಾಗ್ಲಿಲ್ಲಾ. ಅಲ್ಲೇ ಒಂದು ಬೆಂಚ್ ಮೇಲೆ ಕುಳ್ತುಕೊಂಡು ಹಾಗೆ ಕ್ಯೂ ಮುಂದೆ ಹೋಗೋದನ್ನೇ ನೋಡುತ್ತಾ ಕುಳಿತೆ. ಕೊನೆಗೂ ನನ್ನ ಹೆಸರು ಬಂತು.. ನನ್ನ ಡೀಟೇಲ್ಸ್ ಎಲ್ಲ ತೊಗೊಂಡು ಒಬ್ಬಳು ನನ್ನ ಬಾಯೊಳಗೆ ಮತ್ತೆ ಮೂಗೊಳಗೆ ಸ್ಯಾಂಪಲ್ ತೊಗೊಂಡು "ಆಯಿತು ಹೋಗಿ ಅಂದ್ಲು".. "ಟೆಸ್ಟ್ ರಿಸಲ್ಟ್ಸ್ ಸಂಜೆ ಒಳಗಡೆ ಸಿಗುತ್ತೆ" ಅಂದ್ಲು. ಅಲ್ಲಿಂದ ಮನೆಗೆ ಬರೋ ಅಸ್ಟೊತ್ತಿಗೆ ಬಹಳ ಸಂಕಟ ಶುರುವಾಯಿತು. ಜ್ವರ ಜಾಸ್ತಿ ಹಾಗಿ ಎಲ್ಲಿ ಅಲ್ಲೇ ಬಿದ್ದೋಗ್ತಿನೋ ಅಂತ ನಿದಾನಕ್ಕೆ ನೆಡೆದು ಮನೆಗೆ ಬಂದೆ.. ಸ್ವಲ್ಪ ಊಟ ಮಾಡಿ ಮಾತ್ರೆ ಕುಡಿದು ಮಲಗಿದ್ದೆ. ಮೊಬೈಲ್ ಅಲ್ಲಿ ಮೆಸೇಜ್ ಬಂದಿದ್ದು ಗೊತ್ತಾಯಿತು. ಹಾಗೆ ಬೆಡ್ ಅಲ್ಲೇ ಒರಗಿ ಮೆಸೇಜ್ ಓದಿದೆ. ಕೋರೋನ ಪಾಸಿಟಿವ್ ಅಂತ ಬಂದಿತ್ತು. ಎದೆ ಡವ್ ಅಂತೂ. ತಲೆ ಸಿಡಿದ ಹಾಗೆ ಆಯಿತು. ಜ್ವರ ಇನ್ನು ಬಿಟ್ಟಿರಲಿಲ್ಲ. ಹಾಗೆ ಮತ್ತೆ ಮಲಗಿದೆ .

ಮತ್ತೆ ರಾತ್ರಿ ಎಚ್ಚರವಾಯ್ತು .. ಇವಾಗ ಹುಸಿರಾಡೋಕೆ ಹಾಗ್ತ ಇಲ್ಲ.. ಎದೆ ಹುರಿತ ಇದೆ.. ಕೆಟ್ಟ ಕೆಮ್ಮು. ಏನು ಮಾಡೋದು ಗೊತ್ತಾಗ್ಲಿಲ್ಲ. ಎಮರ್ಜೆನ್ಸಿ ಆಂಬುಲೆನ್ಸ್ ಕಾಲ್ ಮಾಡಿದೆ. ಕಣ್ಣು ಮಂಜಾಯ್ತು ಯಾಕೋ , ಯಾವುದೋ ಭಾವಿ ಒಳಗೆ ಬಿದ್ದಂತೆ ಅನ್ನಿಸ್ತ್ತು. .. ನನ್ನ ಮೇಲೆ ಕಂಟ್ರೋಲ್ ಇಲ್ಲದೆ ಹಾಗೆ ಮಲಗಿದೆ.

ಯಾರೋ ದಡ ದಡ ಬಾಗಿಲು ಬಡಿದ ಸದ್ದಾಯಿತು. ಆಂಬುಲೆನ್ಸ್ ಬಂತೇನೋ ಎಂದು ಮೆಲ್ಲಗೆ ನೆಡೆದು ಬಾಗಿಲು ತೆರೆದೇ. ಆನಂದ ನಿಂತಿದ್ದ. ಆಶ್ಚರ್ಯವಾಯಿತು. ಹಾಗೆ ಅವನ್ನನ್ನೇ ನೋಡಿ ನಿಂತೇ. ಅವ್ನು ' ಯಾಕೋ ಏನಾಯಿತು' ಎಂದ. ನಾನು ಯಾಕೋ ಹುಷಾರಿಲ್ಲ ಅಂದೇ.. ಅವ್ನು ಹೌದಾ , ಎಲ್ಲಿ ಅಂತ ಹಣೆ ಮುಟ್ಟಿ ನೋಡಿದ. "ಎಲ್ಲಿ ಹಣೆ ಏನು ಬಿಸಿನೆ ಇಲ್ಲ.. " ಅಂದ. ಅವಾಗ ನಾನು ನನ್ನನ್ನೇ ಮುಟ್ಟಿ ನೋಡಿ ಇದೇನು ಇದು.. 'ಅಯ್ಯಯ್ಯೋ , ನನಗೆ ಕೋರೋನ ಬಂದಿದ್ದು ಕನಸಾಗಿತ್ತ' . ಮತ್ತೆ ಕನಸಿನ ಡೀಟೇಲ್ಸ್ ಎಲ್ಲ ಆನಂದoಗೆ ಗೊತ್ತಾದ್ರೆ ನಗೆಪಾಟಿಲಿ ಹಾಗುತ್ತೆ ಅಂತ ನಾನು 'ಮನಸಿನ್ನಲೇ ನಕ್ಕು ಸುಮ್ಮನಾದೆ'.

No comments: