ಮನಸಿನ ತಳಮಳ ಕೇಳದೆ ನಿನಗೆ
ದೃಷ್ಟಿಯ ತಿರುಗಿಸು ನೋಡಲು ನನಗೆ;
ಮನದಂಗಳದ ಮಾತು ಹೇಳಲು ನಿನಗೆ
ಧೈರ್ಯವು ಬರದು ಉಬ್ಬಿದ ಹೆದೆಗೆ !
ಬಯಸದು ಮನಸು ಪ್ರೀತಿಯ ಹೊರತು
ಮುಳುಗಿದೆ ಜೀವವು ಅಂದಕೆ ಬೆರೆತು ;
ಆಗಸ ಮುಟ್ಟಿದೆ ಪ್ರೀತಿಯ ಕೊಡುಗೆ
ಅಲೆಗಳು ಬಡಿದಿವೆ ರಬಸದಿ ಬದಿಗೆ!
ನಿಂತಿರುವೆ ಕಾದು ಮಲ್ಲಿಗೆಯ ಹಿಡಿದು
ನಗುತಿವೆ ಹೂವ್ಗಳು ಮನದಾಳವ ತಿಳಿದು;
ಹೃದಯವು ಮಾಡಿದೆ ರಪ ರಪ ಸದ್ದು
ಪ್ರೀತಿಯು ನೀಡಿದೆ ಜೀವಕೆ ಮದ್ದು !
ಮಲ್ಲಿಗೆಗೆ ಮಲ್ಲಿಗೆಯ ನೀಡಲಿ ಹೇಗೆ
ಪ್ರೀತಿಗೆ ಪ್ರೀತಿಯ ಹೇಳಲೇ ಕೊನೆಗೆ?
ಯೋಚಿಸಿ ನಿಂತೆನು ಗೊಂದಲದ ನಡುವೆ
ಮಲ್ಲಿಗೆ ನಕ್ಕಳು ನನ್ನಯ ಕಡೆಗೆ!
No comments:
Post a Comment