Monday, 16 February 2009

Happy Valentines Day

ಕಾಯುತಲಿದ್ದನು ಪ್ರೇಮಿಯು ಒಬ್ಬನು
ಸೂರ್ಯನು ಮೂಡುವ ದಿಕ್ಕಿನಲಿ
ಮೊರೆಯುತಲಿದ್ದಳು ಪ್ರೇಯಸಿಯೊಬ್ಬಳು
ಕಣ್ಣನು ಹೊರೆಸುತ ಬಿಕ್ಕುತಲಿ!


ಬಾನಲಿ ಮೂಡಿದ ಚಂದಿರ ಕೂಡ
ಮಾಸಿದ ಕನಿಕರ ತೋರುತಲಿ!
ಅಲೆಗಳು ಬಡಿದವು ಎಲೆಗಳು ಸರಿದವು
ತೋರುತ ಸ್ನೇಹವ ಮೆಚ್ಚುತಲಿ !


ಪ್ರೇತಿಸೊ ಜೀವ ತ್ಯಜಿಸುತ ಮೋಹ
ಹಾಡಿತು ಸುಂದರ ಸಾಲಿನಲಿ
ಪ್ರೀತಿಯ ನಂದಿಸೊ ಬೆಂಕಿಯು ಕೊನೆಗೆ
ಪ್ರೀತಿಸಿ ಅಳಿವುದು ಲೋಕದಲಿ !

No comments: